ಅರೋಗ್ಯವಾಗಿ ದೇಹದ ತೂಕ ಹೆಚ್ಚಿಸುವುದು ಹೇಗೆ ? | How to gain weight tips in kannada

 ನೋಡಲು ಸುಂದರವಾಗಿ ಕಾಣಬೇಕೆಂಬುದು ಪ್ರತಿಯೊಬ್ಬ ವ್ಯಕ್ತಿಯ ಆಸೆಯಾಗಿರುತ್ತದೆ .ಆದರೆ ಕೆಲವು ಜನರು ತೀರಾ ತೆಳ್ಳಗಿರುತ್ತಾರೆ . ಇದರಿಂದ ಬಹಳ ಬೇಸರವಾಗಿ ಹೇಗಾದರೂ ತೂಕ ಹೆಚ್ಚಿಸಿಕ್ಕೊಳ್ಳುವುದಪ್ಪಾ,ದಪ್ಪ ಆಗುವುದು ಹೇಗೆ ಎಂದೆಲ್ಲಾ  ಎಂದು ಯೋಚಿಸುತ್ತಿರುವುದು ಸರ್ವೇ ಸಾಮಾನ್ಯ .

ಅರೋಗ್ಯವಾಗಿ ದೇಹದ ತೂಕ ಹೆಚ್ಚಿಸುವುದು ಹೇಗೆ

ದೇಹದ ತೂಕ ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಕೆಲವು ವಿಧಾನಗಳು . 

ಚೆನ್ನಾಗಿ ತಿನ್ನಿ :


    ಅರೋಗ್ಯವಾಗಿ ದೇಹದ ತೂಕ ಹೆಚ್ಚಿಸುವುದು ಹೇಗೆ
     ಎರಡರಿಂದ ಮೂರು ಬಾರಿ ಅತಿಯಾಗಿ ತಿನ್ನುವ ಬದಲು ಇದನ್ನೇ ಐದರಿಂದ ಆರು ಬಾರಿ ಸ್ವಲ್ಪ ಸ್ವಲ್ಪವೇ ತಿನ್ನುವುದು ಉತ್ತಮ . ಹೀಗೆ ಮಾಡಿವುದರಿಂದ ನಿಮ್ಮ ಜೀರ್ಣ ಕ್ರಿಯೆಯೂ ಕೂಡ ಉತ್ತಮವಾಗಿರುವುದಲ್ಲದೆ ತೂಕವನ್ನೂ ಹೆಚ್ಚಿಸಬಹುದು . 

    ಪೌಷ್ಟಿಕಾಂಶಯುಕ್ತ ಆಹಾರ ಪಧಾರ್ಥಗಳನ್ನು ಸೇವಿಸಿ :

    ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹೆಚ್ಚು ಪೌಷ್ಟಿಕಾಂಶಯುಕ್ತ ಪದಾರ್ಥಗಳಾದ ಧಾನ್ಯ , ಹಣ್ಣು  ಮತ್ತು ತರಕಾರಿಗಳನ್ನು ಬಳಸುವುದು ಉತ್ತಮ .
    ಇಂತಹ ಆಹಾರವು ನಿಮ್ಮ ತೂಕವನ್ನು ಹೆಚ್ಚಿಸುವುದಲ್ಲದೆ ,ನಿಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ .

    ಕ್ಯಾಲೋರಿಯುಕ್ತ ಪಾನೀಯಗಳ್ಳನ್ನು ಸೇವಿಸಿ :    

    ಅರೋಗ್ಯವಾಗಿ ದೇಹದ ತೂಕ ಹೆಚ್ಚಿಸುವುದು ಹೇಗೆ

    ಚಹಾ ,ಕಾಫಿ ಮುಂತಾದವುಗಳ ಬದಲಾಗಿ ಹೆಚ್ಚಾಗಿ ಹಾಲು ಅಥವಾ ತಾಜಾ ಹಣ್ಣುಗಳಿಂದ ಮಾಡಿದ ತಂಪು ಪಾನೀಯಗಳ್ಳನ್ನು ಕುಡಿಯಿರಿ .

    ಇತರ ಪಾನೀಯಗಳು ಹೊಂದಿರದ ಕ್ಯಾಲೋರಿ ಮತ್ತು ಪೋಷಕಾಂಶಗಳನ್ನು ಇವು ನಿಮಗೆ ಕೊಡುತ್ತದೆ .

    ಜಂಕ್ ಫುಡ್ ಗಳಿಂದ  ದೂರ ಇರಿ :

    ಅರೋಗ್ಯವಾಗಿ ದೇಹದ ತೂಕ ಹೆಚ್ಚಿಸುವುದು ಹೇಗೆ

    ಕಡಿಮೆ ಪೋಷಕಾಂಶವುಳ್ಳ ಆಹಾರ ಪದಾರ್ಥಗಳಾದ ಜಂಕ್ ಫುಡ್ ಗಳು ನಿಮ್ಮ ದೇಹದಲ್ಲಿ ಬೊಜ್ಜು ಬೆಳೆಯುವುದಕ್ಕೆ ಸಹಾಯ ಮಾಡುವುದಲ್ಲದೆ ನಿಮ್ಮ ದೇಹದಲ್ಲಿ ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು .

    ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸಿ :

    ಅರೋಗ್ಯವಾಗಿ ದೇಹದ ತೂಕ ಹೆಚ್ಚಿಸುವುದು ಹೇಗೆ

    ಕಡಿಮೆ ತೂಕವುಳ್ಳ ಜನರು ಆಹಾರವು ತಮ್ಮನ್ನು ಆಕರ್ಷಿಸುವುದಿಲ್ಲ ಎಂದು ದೂರುತ್ತಾರೆ ,ಹಾಗಾಗಿ ಪ್ರತಿದಿನ ರುಚಿ ರುಚಿಯಾದ ಅಡುಗೆಯನ್ನು ಮಾಡುವುದು ಉತ್ತಮ .

    ಹೊಸ ಹೊಸ ಬಗೆಯ ಭಕ್ಷ್ಯ ಗಳನ್ನು ತಯಾರಿಸುವ ಮೂಲಕ ನಿಮ್ಮ ಆಹಾರವನ್ನು ಹೆಚ್ಚು ಇಷ್ಟಪಡುವಂತೆ ಮಾಡಿ .

    ವ್ಯಾಯಾಮ :

    ವ್ಯಾಯಾಮವು ಹಸಿವನ್ನು ಹೆಚ್ಚಿಸುತ್ತದೆ . ಇದು ನಿಮ್ಮ ಸ್ನಾಯುಗಳಿಗೆ ಬಲಿಷ್ಠಗೊಳಿಸುವುದಲ್ಲದೆ  ತೂಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ .

    ತೂಕ ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು :

    1. ಹಾಲು :

    •  ಹಾಲು ಒಂದು ಕೊಬ್ಬು ,ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೊಟೀನ್ಗಳ ಮಿಶ್ರಣವಾಗಿದೆ .
    • ಇದು ಕ್ಯಾಲ್ಸಿಯಂ ಸೇರಿದಂತೆ  ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ .
    • ವ್ಯಾಯಾಮದ ನಂತರ ಕೆನೆಭರಿತ ಹಾಲನ್ನು ಕುಡಿಯುವುದರಿಂದ ಸ್ನಾಯುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಮಿಸಲು ಸಹಾಯ ಮಾಡುತ್ತದೆ .
    • ಇದು ದೇಹದ ತೂಕವನ್ನು ಹೆಚ್ಚಿಸಲು ಬಯಸುವ ಜನರಿಗೆ ಉತ್ತಮ ಆಯ್ಕೆ .

    2. ಪ್ರೋಟೀನ್ ಶೇಕ್ಸ್ :

    • ಪ್ರೋಟೀನ್ ಶೇಕ್ ಗಳು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
    • ಪೂರ್ವತಯಾರಿತ ಪ್ರೋಟೀನ್ ಶೇಕ್ ಗಳ ಬದಲು ತಾಜಾ ಪ್ರೊಟೀನ್ ಶೇಕ್ ಗಳನ್ನು ಮಾಡಿ ಕುಡಿಯುವುದು ಉತ್ತಮ .

    3. ಅಕ್ಕಿ :

    • ಒಂದು ಕಪ್ ಅಕ್ಕಿಯಲ್ಲಿ ಸುಮಾರು ೨೦೦ ಕ್ಯಾಲೋರಿಯಷ್ಟು ಅಂಶವಿರುತ್ತದೆ .
    • ಇವು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳ ಉತ್ತಮ ಮೂಲವಾಗಿದೆ .
    • ಇದು ತೂಕ ಹೆಚ್ಚಿಸಿಕ್ಕೊಳ್ಳುವವರಿಗೆ ಒಳ್ಳೆಯ ಆಹಾರ .  
    4. ಮೊಟ್ಟೆ :

    • ಮೊಟ್ಟೆಯು ಪ್ರೋಟೀನ್ ,ಆರೋಗ್ಯಕರ  ಕೊಬ್ಬು ಮತ್ತು ಇತರ ಪೋಷಕಾಂಶಗಳಿಂದ ಭರಿತವಾಗಿದೆ .
    • ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಮೊಟ್ಟೆಯಲ್ಲಿರುವ ಹಳದಿ ಲೋಳೆಯಲ್ಲಿ ಅಡಕವಾಗಿರುತ್ತದೆ .

    5. ಕೆಂಪು ಮಾಂಸ :

    • ಕೆಂಪು ಮಾಂಸವು ಲುಸಿನ್(ಅಮೈನೋಆಸಿಡ್ ) ಅನ್ನು ಹೊಂದಿರುವುದರಿಂದ ಸ್ನಾಯುವನ್ನು ಬಲಪಡಿಸಲು ಸಹಾಯಕಾರಿ .
    • ಇದು ಪ್ರೋಟೀನ್ ಮತ್ತು ಕೊಬ್ಬಿನ ಅಂಶ ಎರಡನ್ನು ಹೊಂದಿರುವುದರಿಂದ ವೇಗವಾಗಿ ತೂಕ ಹೆಚ್ಚಿಸಿಕ್ಕೊಳ್ಳುವುದ್ದಕ್ಕೆ ಹೆಸರುವಾಸಿ .

    6. ಓಟ್ಸ್ :

    • ತೂಕವನ್ನು ಇಳಿಸುವುದರ ಜೊತೆಗೆ ತೂಕ ಹೆಚ್ಚಿಸಿಕೊಳ್ಳಲು ಯೋಚಿಸುವವರಿಗೂ ಓಟ್ಸ್ ಒಂದು ಬಹಳ ಸಹಕಾರಿಯಾಗಿದೆ .
    • ಹಾಲು ,ಬಾಳೆಹಣ್ಣು ,ಒಣದ್ರಾಕ್ಷಿ ಮತ್ತು ಇತರ ಪ್ರೋಟೀನ್ ಪದಾರ್ಥಗಳೊಂದಿಗೆ ಓಟ್ಸ್  ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ .

    7. ಒಣಗಿದ ಹಣ್ಣುಗಳು :

    • ಒಣ ಹಣ್ಣುಗಳು ಕ್ಯಾಲೋರಿ ,ಆರೋಗ್ಯಕರ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ .
    • ಎಲ್ಲಾ ರೀತಿಯ ಒಣಗಿದ ಹಣ್ಣುಗಳಲ್ಲಿ ನೈಸರ್ಗಿಕವಾಗಿ ಅಧಿಕ ಸಕ್ಕರೆ ಅಂಶ ಇರುವುದರಿಂದ ತೂಕವನ್ನು ಬೇಗನೆ ಹೆಚ್ಚಿಸಿಕ್ಕೊಳ್ಳಲು ಇದು ಒಂದು ಸುಲಭ ಮಾರ್ಗ .

    8. ಆಲೂಗಡ್ಡೆ :

    • ಪಿಷ್ಟ ಆಹಾರಗಳಾದ ಆಲೂಗಡ್ಡೆ ಮತ್ತು ಜೋಳವು ತ್ವರಿತ ತೂಕ ಹೆಚ್ಚಿಸುವುದಕ್ಕೆ ಹೆಸರುವಾಸಿ .
    • ಆಲೂಗಡ್ಡೆಯು ಕ್ಯಾಲೋರಿ ,ಕಾರ್ಬೋಹೈಡ್ರೇಟ್ ,ಫೈಬರ್ ಮತ್ತು ಇನ್ನಿತರೆ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ .
    • ಇದು ತೂಕವನ್ನು ಹೆಚ್ಚಿಸುವುದಲ್ಲದೆ ,ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸಲು ಸಹಾಯ ಮಾಡುತ್ತದೆ .

    9. ಕೊಬ್ಬಿನ ಮತ್ತು ಎಣ್ಣೆಯುಕ್ತ ಮೀನು :

    • ಸಾಲ್ಮೊನ್ನಂತಹ ಕೊಬ್ಬಿನ ಮೀನುಗಳಲ್ಲಿ ಅಗತ್ಯವಾದ ಕೊಬ್ಬಿನಾಮ್ಲಗಳು ಮತ್ತು  ಪ್ರೊಟೀನ್ಗಳಿವೆ.
    • ಇವುಗಳು ತೂಕವನ್ನು ಹೆಚ್ಚಿಸುವುದಲ್ಲದೆ ಶರೀರಕ್ಕೆ ಅಗತ್ಯವಾಗಿ ಬೇಕಾದ ರೋಗನಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ.

    10. ಬಾಳೆಹಣ್ಣು :

    • ಬಾಳೆಹಣ್ಣು ತೂಕವನ್ನು ಹೆಚ್ಚಿಸುವ ಅತ್ಯುತ್ತಮ ಮೂಲವಾಗಿದೆ  .
    • ದಿನದಲ್ಲಿ ಎರಡು ಬಾಳೆಹಣ್ಣನ್ನು ತಿನ್ನುವುದರಿಂದ ವೇಗವಾಗಿ ತೂಕವನ್ನು ಗಳಿಸಲು ಸಾಧ್ಯವಾಗುತ್ತದೆ .
    ಇನ್ನಷ್ಟು ಲೇಖನಗಳನ್ನು ಓದಿ:


    ಕಾಮೆಂಟ್‌ಗಳು

    ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

    ಗ್ರಾಮ ಸ್ವರಾಜ್ಯ ಕನ್ನಡ ಪ್ರಬಂಧ | Grama swaraj essay in kannada.

    ಕರ್ನಾಟಕ ಹವಾಮಾನ ಇಂದು – ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಇತರೆ ನಗರಗಳ ನೇರ ಮಾಹಿತಿ

    ಪರಿಸರ ಮಾಲಿನ್ಯ (Environmental Pollution) – ಕನ್ನಡ ಪ್ರಬಂಧ | ವಾಯು, ಜಲ ಮತ್ತು ಭೂ ಮಾಲಿನ್ಯ