ಮನೆಯಲ್ಲೇ ಇರುವ ಆಹಾರ ಪದಾರ್ಥಗಳಿಂದ ಮನೆ ಮದ್ದು । List of home remedies in kannada.
ಸರಿಯಾದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಖನಿಜಗಳು, ಜೀವಸತ್ವಗಳು ಮತ್ತು ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸಬಹುದು ಎಂದು ನಿಮಗೆ ಈಗಾಗಲೇ ತಿಳಿದಿದೆ. ಆದರೆ ಕೆಲವು ಆಹಾರ ಪದಾರ್ಥಗಳು ನಿಮ್ಮ ಅರೋಗ್ಯ ತೊಂದರೆಗಳಾದ ಬಿಕ್ಕಳಿಸುವಿಕೆ, ಅಸ್ತಮಾ,ಇನ್ನಿತರೆ ಸಮಸ್ಯೆ ಗಳನ್ನು ನಿವಾರಿಸುತ್ತದೆ. ಆದರೆ ಗಂಭೀರ ಪರಿಸ್ಥಿತಿಗಳಿಗೆ ವೈದ್ಯರ ಗಮನ ಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳುವುದು ಅವಶ್ಯಕ. ಈ ಲೇಖನದಲ್ಲಿ ನಿಮಗೆ ಸಣ್ಣ ಆರೋಗ್ಯ ಸಮಸ್ಯೆ ಎದುರಾದಾಗ ಈ ಕೆಳಗಿನ ಔಷಧಗಳನ್ನು ಸೇವಿಸುವುದರಿಂದ ಅರೋಗ್ಯ ಸಮಸ್ಯೆ ಸುಧಾರಿಸುವ ಸಾಧ್ಯತೆ ಹೆಚ್ಚು .

ಮನೆ ಮದ್ದುಗಳು ಮನೆಯಲ್ಲಿ ರೋಗಗಳಿಗೆ ತ್ವರಿತವಾಗಿ, ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಎಲ್ಲ ನೈಸರ್ಗಿಕ ತಜ್ಞರು ಶಿಫಾರಸು ಮಾಡಿದ ಮಾರ್ಗಗಳಾಗಿವೆ . ಆದ್ದರಿಂದ ಇಂತಹ ಔಷಧಗಳಿಗೆ ನಿಮ್ಮ ರೆಫ್ರಿಜರೇಟರ್ ಮತ್ತು ಕಿಚನ್ ಬೀರುವಿನಲ್ಲಿ ಸ್ವಲ್ಪ ಜಾಗವನ್ನು ತೆರವುಗೊಳಿಸಿ.
1. ಶುಂಠಿ :
- ಊಟಕ್ಕೆ ಮುಂಚೆ ಸ್ವಲ್ಪ ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣದ ತೊಂದರೆ ದೂರವಾಗುತ್ತದೆ.
- ತಲೆನೋವಿಗೆ ಹಸಿ ಶುಂಠಿಯನ್ನು ನೀರಿನಲ್ಲಿ ಅರೆದು ಗಂಧವನ್ನು ಹಣೆಗೆ ಹಚ್ಚಿ ಬೆಚ್ಚಗೆ ಹೊದ್ದು ಮಲಗಿಕೊಂಡರೆ ಸ್ವಲ್ಪ ಸಮಯದ ನಂತರ ದೇವರು ಸುರಿದುಹೋಗಿ ನೋವು ಮಾಯವಾಗಿ ಹೋಗುತ್ತದೆ.
- ಹಸಿಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನದಲ್ಲಿ ಮೂರು ನಾಲ್ಕು ಬಾರಿ ಸೇವಿಸಿದರೆ ನೆಗಡಿ ನಿವಾರಣೆಯಾಗುತ್ತದೆ.
- ಪ್ರತಿ ಊಟದ ನಂತರ ಒಂದು ಚೂರು ಶುಂಠಿ ಆಗಿದ್ದು ಚಪ್ಪರಿಸು ಅಭ್ಯಾಸ ಮಾಡಿಕೊಂಡರೆ ಹೊಟ್ಟೆ ಹುಣ್ಣು, ಅಜೀರ್ಣ ಹಾಗೂ ಪಿತ್ತದ ನಿವಾರಣೆಯಾಗುತ್ತದೆ.
- ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.
2. ಜೇನುತುಪ್ಪ :
- ಬಾಯಿಯ ಹುಣ್ಣು ನಿವಾರಿಸಲು ದಿನಕ್ಕೆ ನಾಲ್ಕು ಬಾರಿ ಜೇನುತುಪ್ಪವನ್ನು ಹಚ್ಚಬೇಕು.
- ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಾಂತವಾಗುತ್ತದೆ ಮತ್ತು ಗಾಯ ಶೀಘ್ರವೇ ಮಾಡಲು ಸಹಾಯ ಮಾಡುತ್ತದೆ.
- ಜೇನುತುಪ್ಪವನ್ನು ಕ್ರಮ ಬದ್ಧವಾಗಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
- ಚಿಕ್ಕ ಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ 1 ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ತುಪ್ಪ ಜೇನುತುಪ್ಪ ಬೆರೆಸಿ ಕುಡಿಸಿದರೆ ಶೀಘ್ರವಾಗಿ ಗುಣಮುಖವಾಗಲು ಸಹಾಯಮಾಡುತ್ತದೆ.
- ಜೇನುತುಪ್ಪದಲ್ಲಿ ಪ್ರತಿದಿನವೂ ಬೆಳಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಜೀರ್ಣಶಕ್ತಿ ಸುಧಾರಿಸುವುದು.
3. ನಿಂಬೆಹಣ್ಣು:
- ನಿಂಬೆ ಹಣ್ಣಿನ ರಸದಲ್ಲಿ ಸಕ್ಕರೆ ಕಲಸಿ ಸ್ವಲ್ಪ ಸ್ವಲ್ಪವೇ ಕುಡಿಯುತ್ತಿದ್ದರೆ ವಾಂತಿ ಸಮಸ್ಯೆ ನಿವಾರಿಸುವುದು.
- ಮಧ್ಯಮಗಾತ್ರದ ನಿಂಬೆ ಹಣ್ಣನ್ನು ಕತ್ತರಿಸಿ ರಸ ಹಿಂಡಿ ಆ ರಸವನ್ನು ಸೇವಿಸುವುದರಿಂದ ಹುಳಿತೇಗು ನಿವಾರಣೆಯಾಗುವುದು.
- ಜ್ವರದಿಂದ ನರಳುತ್ತಿರುವ ರೋಗಿಯು ನಿಂಬೆ ರಸವನ್ನು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
- ತಾಜಾ ಕಬ್ಬಿನ ಹಾಲಿಗೆ ಎಳನೀರು,ಹಸಿ ಶುಂಠಿ ರಸ,ನಿಂಬೆರಸ ಸೇರಿಸಿ ಸೇವಿಸುವುದರಿಂದ ಮೂತ್ರವಿಸರ್ಜನೆ ಚೆನ್ನಾಗಿ ಆಗುವುದು.
4. ದ್ರಾಕ್ಷಿ ಹಣ್ಣು:
- ಬಿಳಿ ದ್ರಾಕ್ಷಿಯನ್ನು ನಿರಂತರವಾಗಿ ತಿಂದರೆ ಹೊಟ್ಟೆ ಹುಣ್ಣು ದೂರವಾಗುವುದು.
- ರಕ್ತಹೀನತೆಯಿಂದ ನರಳುತ್ತಿರುವ ದ್ರಾಕ್ಷಿಯ ರಸದೊಂದಿಗೆ ಜೇನುತುಪ್ಪ ಬೆರೆಸಿ ಸೇವಿಸಿದರೆ ರಕ್ತ ವೃದ್ಧಿಯಾಗುತ್ತದೆ.
- ಅಜೀರ್ಣ, ಹುಳಿತೇಗು ಮತ್ತು ಮಲಬದ್ಧತೆಯನ್ನು ನಿವಾರಿಸಲು ಹುಳಿ ದ್ರಾಕ್ಷಿ ರಸವನ್ನು ಸೇವಿಸಬೇಕು.
- ಒಣದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳು ಬಲಿಷ್ಠವಾಗುತ್ತದೆ.ಇದರಿಂದ ರಕ್ತ ಹೆಚ್ಚುವುದಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
5. ತುಳಸಿ:
- ತುಳಸಿ ಗಿಡದ ಬೇರಿನಿಂದ ಗಂಧವನ್ನು ತೆಗೆದು ಚೇಳು ಕುಟುಕಿದ ಸ್ಥಾನಕ್ಕೆ ಲೇಪಿಸುವುದರಿಂದ ಚೇಳಿನ ವಿಷ ಇಳಿದು ಹೋಗುವುದು.
- ಕಿವಿಯ ಒಳಗೆ ಹುಣ್ಣಾಗಿದ್ದರೆ ತುಳಸಿ ಎಲೆಯ ರಸವನ್ನು ತೆಗೆದು ಒಂದೆರಡು ತೊಟ್ಟು ರಸವನ್ನು ಕಿವಿಗೆ ಹಾಕುವುದರಿಂದ ಶೀಘ್ರವೇ ಗುಣ ಕಂಡುಬರುವುದು.
- ನೆಗಡಿ ವಾಸಿಯಾಗಲು ತುಳಸಿ ಸೊಪ್ಪಿನ ಕಷಾಯವನ್ನು ತಯಾರಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಬೇಕು.
- ಒಂದು ಟೀ ಚಮಚ ತುಳಸಿ ಸೊಪ್ಪಿನ ರಸವನ್ನು ದಿನಕ್ಕೆರಡು ಬಾರಿಯಂತೆ ಎರಡು-ಮೂರು ದಿನಗಳ ಕಾಲ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುವುದು.
6. ಬೆಳ್ಳುಳ್ಳಿ:
- ದೇಹವನ್ನು ಹೆಚ್ಚು ಶಾಖ ವಾಗಿದ್ದರೂ ಮತ್ತು ನರಗಳಲ್ಲಿ ಹೆಚ್ಚು ಚೈತನ್ಯ ತುಂಬಿಸಿಕೊಳ್ಳಲು ಬೆಳ್ಳುಳ್ಳಿಯನ್ನು ಪ್ರತಿದಿನವು ಸೇವಿಸಬೇಕು.
- ಜೇನುತುಪ್ಪದೊಂದಿಗೆ ಬೆಳ್ಳುಳ್ಳಿ ರಸ 1 ಟೀ ಚಮಚ ವನ್ನು ಸೇವಿಸುವುದರಿಂದ ಜಂತುಹುಳುಗಳ ಸಮಸ್ಯೆ ನಿವಾರಣೆಯಾಗುತ್ತದೆ.
- ಕೆಮ್ಮು ಮತ್ತು ನೆಗಡಿ ಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಬಳಸಿದರೆ ಕಾಯಿಲೆ ದೂರವಾಗುವುದು.
7. ಲವಂಗ:
- ಹಲ್ಲಿನ ನೋವಿಗೆ ಲವಂಗದ ಎಣ್ಣೆಯನ್ನು ಹಲ್ಲಿನ ಮೇಲೆ ಬಿಡುವುದರಿಂದ ನೋವು ಕಡಿಮೆಯಾಗುತ್ತದೆ.
- ಲವಂಗವನ್ನು ಕಲ್ಲು ಉಪ್ಪಿನಲ್ಲಿ ಚಪ್ಪರಿಸುತ್ತಾ ನೀರು ಕುಡಿಯುತ್ತಿದ್ದರೆ ಗಂಟಲು ಕೆರೆತ ಮತ್ತು ಕೆಮ್ಮು ಗುಣವಾಗುವುದು.
- ಲವಂಗವನ್ನು ಹಲ್ಲುಗಳಿಂದ ಅಗಿದು ಚಪ್ಪರಿಸುತ್ತಿದ್ದರೆ ಬಿಕ್ಕಳಿಕೆ ನಿಲ್ಲುವುದು.
8. ಎಳನೀರು :
- ಎಳನೀರನ್ನು ಕುಡಿದರೆ ಬಳಲಿಕೆ ಕಡಿಮೆಯಾಗಿ, ದಾಹ ಪರಿಹಾರವಾಗುವುದು.
- ಎಳನೀರಿನಿಂದ ಕೆಲವು ವಾರಗಳ ಕಾಲ ಮುಖವನ್ನು ತೊಳೆಯುತ್ತಿದ್ದರೆ ಮೊಡವೆಗಳು ಮಾಯವಾಗುತ್ತದೆ. ಮುಖದಲ್ಲಿರುವ ಕಪ್ಪು ಕಲೆಗಳು ದೂರವಾಗಿ ಮುಖ ಕಾಂತಿಯುಕ್ತವಾಗುತ್ತದೆ.
- ಎಳನೀರಿಗೆ ನಿಂಬೆಹಣ್ಣಿನ ರಸವನ್ನು ಹಿಂದಿ ಕೊಂಡು ಕುಡಿದರೆ ಮೂತ್ರವಿಸರ್ಜನೆ ಸಂಬಂಧಿತ ರೋಗಗಳು ನಿವಾರಣೆಯಾಗುತ್ತದೆ.
9. ರಾಗಿ :
- ರಾಗಿ ಹಿಟ್ಟಿನಿಂದ ಮಾಡಿದ ಮುದ್ದೆಯನ್ನು ಸೇವಿಸಿದರೆ ಮಧುಮೇಹ ರೋಗ ಉಲ್ಬಣವಾಗುವುದಿಲ್ಲ.
- ರಾಗಿಮುದ್ದೆಯು ದೇಹದ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.
- ರಾಗಿ ಹಿಟ್ಟನ್ನು ಅರಸಿನ ಪುಡಿಯೊಂದಿಗೆ ಬೆರೆಸಿ ಕೆಂಡದ ಮೇಲೆ ಸ್ವಲ್ಪ ಸ್ವಲ್ಪವೇ ಹಾಕಿದಾಗ ಬರುವ ಹೊಗೆಯನ್ನು ಮೂಗಿನ ಮೂಲಕ ಸೇವಿಸುವುದರಿಂದ ನೆಗಡಿ ಗುಣವಾಗುವುದು.
10. ಅರಿಶಿನ :
- ಅಡುಗೆಯಲ್ಲಿ ಅರಿಶಿನವನ್ನು ಬಳಸುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುವುದು, ಅಲ್ಲದೆ ಕ್ರಿಮಿಗಳನ್ನು ನಾಶ ಪಡಿಸಲು ಮತ್ತು ಅವನ್ನು ನಿವಾರಿಸಲು ಸಹಾಯಮಾಡುತ್ತದೆ.
- ಹಸುವಿನ ಹಾಲಿಗೆ ಅರಸಿನದ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಕೆಮ್ಮು ನೆಗಡಿ ದೂರವಾಗುತ್ತದೆ.
ಮೇಲೆ ತಿಳಿಸಲಾದ ಶುಂಠಿ ,ಜೇನುತುಪ್ಪ ,ನಿಂಬೆ ,ಬೆಳ್ಳುಳ್ಳಿ ,ತುಳಸಿ ,ಲವಂಗ ,ಎಳನೀರು ,ರಾಗಿ ,ಅರಶಿನ ಮುಂತಾದವುಗಳು ಮನೆಯಲ್ಲೇ ದೊರಕುವ ಮದ್ದಾಗಿವೆ .\
ಇನ್ನಷ್ಟು ಲೇಖನಗಳನ್ನು ಓದಿ :
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ