ದೇಹದ ತೂಕ ಕಳೆದುಕೊಳ್ಳುವುದು ಹೇಗೆ ? । How to lose weight tips in kannada.

 ತೂಕ ಹೆಚ್ಚಿಸುವುದರ ಬಗ್ಗೆ ಚಿಂತಿಸುವ ಜನರು ಒಂದೆಡೆಯಾದರೆ ಆರೋಗ್ಯಕರವಾಗಿ ತೂಕ ಇಳಿಸುವುದರ ಬಗ್ಗೆ ಚಿಂತಿಸುವವರ ಇನ್ನೊಂದು ಕಡೆ. ಹೇಗಪ್ಪ ದೇಹದ ಬೊಜ್ಜು ಕರಗಿಸುವುದು,ಹೇಗಪ್ಪ ಹೊಟ್ಟೆಯ ಬೊಜ್ಜು ಕರಗಿಸುವುದು, ಒಮ್ಮೆ ದೇಹದ ತೂಕ ಕಡಿಮೆ ಮಾಡಿಕೊಂಡರೆ ಸಾಕಪ್ಪ ಎಂದೆಲ್ಲ ಯೋಚಿಸುತ್ತಿರುತ್ತಾರೆ.


 ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ನೀವು ಅತಿ ವೇಗವಾಗಿ ತೂಕವನ್ನು ಇಳಿಸಿಕೊಳ್ಳಬಹುದು.

1. ಬೆಳಗಿನ ಉಪಹಾರವನ್ನು ಬಿಡಬೇಡಿ :

 ಹೌದು, ಬೆಳಗಿನ ಉಪಹಾರವನ್ನು ಬಿಡುವುದು ನೀವು ತೂಕ ಇಳಿಸಿಕೊಳ್ಳಲು ಎಂದಿಗೂ ಸಹಾಯ ಮಾಡುವುದಿಲ್ಲ. ಬೆಳಗಿನ ಉಪಹಾರವನ್ನು ಬಿಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗದೇ ಇರಬಹುದು.

2. ನಿಯಮಿತವಾಗಿ ತಿನ್ನಿ :

 ನಿಯಮಿತವಾಗಿ ತಿನ್ನುವುದು ನಿಮ್ಮ ದೇಹದಲ್ಲಿ ಕ್ಯಾಲೋರಿಯ ಪ್ರಮಾಣವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಇದು ಕೊಬ್ಬು ಮತ್ತು ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡುವುದುರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

3. ಸಾಧ್ಯವಾದಷ್ಟು ಹಣ್ಣು ಮತ್ತು ತರಕಾರಿ ತಿನ್ನಿ :

 ಸಸ್ಯಾಹಾರ ಪದಾರ್ಥಗಳಾದ ಹಣ್ಣು ಮತ್ತು ತರಕಾರಿಗಳಲ್ಲಿ ಕೊಬ್ಬಿನ  ಪ್ರಮಾಣ ಕಡಿಮೆ ಇರುವುದರಿಂದ ಇದು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ಇಂತಹ ಆಹಾರ ಪದಾರ್ಥಗಳಲ್ಲಿ  fibre-3 ಅಂಶಗಳಿರುವುದರಿಂದ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.  ಹಣ್ಣು ಮತ್ತು ತರಕಾರಿಗಳಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳಾದ
 ವಿಟಮಿನ್ ಮತ್ತು ಮಿನರಲ್ ಗಳನ್ನು ಹೊಂದಿರುವುದರಿಂದ ದೇಹವನ್ನು ಆರೋಗ್ಯವಾಗಿಡಲು ಸಹಾಯಮಾಡುತ್ತದೆ.ಹೆಚ್ಚಾಗಿ ನೀರು ಕುಡಿಯಿರಿ.

4. ಹೆಚ್ಚು ಸಕ್ರಿಯವಾಗಿರಿ (be more active):

 ಸಕ್ರಿಯವಾಗಿರುವುದು ಅಂದರೆ ಲವಲವಿಕೆಯಿಂದ ಇರುವುದು ತೂಕವನ್ನು ಕಳೆದುಕೊಳ್ಳಲು ಮತ್ತು ಬೊಜ್ಜನ್ನು ಕರಗಿಸಲು ಸುಲಭ ಮಾರ್ಗ. ಇದು ಸಾಕಷ್ಟು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಒದಗಿಸುತ್ತದೆ.
 ವ್ಯಾಯಾಮ (exercise) ಮಾಡುವುದು ನೀವು ಲವಲವಿಕೆಯಿಂದ ಇರಲು ಒಂದು ಉತ್ತಮ ವಿಧಾನ. ಡಯಟ್ (diet) ಇಂದ ಕಳೆದು ಕೊಳ್ಳಲಾಗದ ಹೆಚ್ಚುವರಿ ಕೊಬ್ಬು ಮತ್ತು ಕ್ಯಾಲೋರಿಯನ್ನು ಕಳೆದುಕೊಳ್ಳಲು ವ್ಯಾಯಾಮವು ಸಹಾಯಮಾಡುತ್ತದೆ. ಆದಷ್ಟು ಕ್ರೀಡೆ, ಕೆಲಸ, ನೃತ್ಯ ಮುಂತಾದವುಗಳಲ್ಲಿ ಭಾಗವಹಿಸಿ.

 5.ಫೈಬರ್ ಯುಕ್ತ  ಆಹಾರ ಪದಾರ್ಥ :

 ತೂಕವನ್ನು ಕಡಿಮೆ ಮಾಡಲು ಫೈಬರ್ ಯುಕ್ತ ಆಹಾರ ಪದಾರ್ಥಗಳಾದ ಹಣ್ಣುಗಳು, ಬಟಾಣಿ, ಬೀನ್ಸ್, ಬ್ರೌನ್ ರೈಸ್, ಓಟ್ಸ್  ಇತ್ಯಾದಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

6. ಜಂಕ್ ಫುಡ್ ಗಳಿಂದ ದೂರ  ಇರಿ:

 ಚಾಕೊಲೇಟ್, ಬಿಸ್ಕೆಟ್, ನೂಡಲ್ಸ್, ಪಿಜ್ಜಾ-ಬರ್ಗರ್ ಇವುಗಳ ಬದಲಾಗಿ ತಾಜಾ ಹಣ್ಣುಗಳು, ಪಾಪ್ಕಾರ್ನ್ ಮೊದಲಾದ ತಿನಿಸುಗಳನ್ನು ಆರಿಸಿಕೊಳ್ಳುವುದು ಒಳಿತು .

7.  ಕಾಫಿ   ಕುಡಿಯಿರಿ:

 ಉತ್ತಮ ಗುಣಮಟ್ಟದ ಕಾಫಿಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಕಾಫಿಯು ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ. ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕಾಫಿಯಲ್ಲಿರುವ ಕೆಫಿನ್ ಚಯಾಪಚಯವನ್ನು 3-11% ರಷ್ಟು ಹೆಚ್ಚಿಸುತ್ತದೆ. ಇದು ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ.

8. ಗ್ರೀನ್ ಟೀ (Green Tea ) :

 ಕಾಫಿಯಂತೆ ಗ್ರೀನ್ ಟೀ ಕೂಡ ಅನೇಕ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಹೊಂದಿದೆ. ಅವುಗಳಲ್ಲಿ ತೂಕನಷ್ಟ ವೂ ಒಂದು. ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ಕರಗಿಸಲು ಗ್ರೀನ್ ಟೀ  ಸಹಾಯ ಮಾಡುತ್ತದೆ. ಬೊಜ್ಜನ್ನು ಕರಗಿಸಲು ಬಯಸುವರು ಹೆಚ್ಚಾಗಿ ಗ್ರೀನ್ ಟೀ ಉಪಯೋಗಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ.

9.  ನಿಧಾನವಾಗಿ ತಿನ್ನಿ:

 ಆಹಾರವನ್ನು ಅಗಿಯಲು ಮತ್ತು ಸವಿಯಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕು.ಈ ತಂತ್ರವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ಅಜೀರ್ಣದಂತಹ ಸಮಸ್ಯೆಯಿಂದ ದೂರವಿರಬಹುದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗ್ರಾಮ ಸ್ವರಾಜ್ಯ ಕನ್ನಡ ಪ್ರಬಂಧ | Grama swaraj essay in kannada.

ಕರ್ನಾಟಕ ಹವಾಮಾನ ಇಂದು – ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಇತರೆ ನಗರಗಳ ನೇರ ಮಾಹಿತಿ

ಪರಿಸರ ಮಾಲಿನ್ಯ (Environmental Pollution) – ಕನ್ನಡ ಪ್ರಬಂಧ | ವಾಯು, ಜಲ ಮತ್ತು ಭೂ ಮಾಲಿನ್ಯ