ನೆಟ್ ವರ್ಕ್ ಮಾರ್ಕೆಟಿಂಗ್ ಎಂದರೇನು ? What is network marketing meaning and explanation in kannada .

ನೆಟ್ ವರ್ಕ್ ಮಾರ್ಕೆಟಿಂಗ್ (Network Marketing) ಒಂದು ವ್ಯಾಪಾರ ಮಾದರಿಯಾಗಿದ್ದು ,ಇಲ್ಲಿ ಯಾವುದೇ ಮಧ್ಯವರ್ತಿಗಳ ಸಹಾಯ ಇಲ್ಲದೆ ವಸ್ತುಗಳನ್ನು  ಡಿಸ್ಟ್ರಿಬ್ಯೂಟರ್ ಗಳ ಮೂಲಕ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತದೆ .ಇಲ್ಲಿ ಗ್ರಾಹಕರೇ ಸ್ವತಃ ಡಿಸ್ಟ್ರಿಬ್ಯೂಟರ್ ಗಳಾಗಿರುತ್ತಾರೆ .

                                             ನೆಟ್ ವರ್ಕ್  ಮಾರ್ಕೆಟಿಂಗ್ ಎಂದರೇನು

ನೆಟ್ ವರ್ಕ್ ಮಾರ್ಕೆಟಿಂಗ್ ಅನ್ನು ಪಿರಮಿಡ್ ಮಾರ್ಕೆಟಿಂಗ್ (Pyramid Marketing) ,ಮಲ್ಟಿ ಲೆವೆಲ್ ಮಾರ್ಕೆಟಿಂಗ್ (Multi Level Marketing -MLM) ,ರೆಫರಲ್ ಮಾರ್ಕೆಟಿಂಗ್ (Referral Marketing) ,ಡೈರೆಕ್ಟ್ ಸೆಲ್ಲಿಂಗ್ ಬಿಸಿನೆಸ್ (Direct Selling Business) ಎಂದೂ ಕರೆಯಲಾಗುತ್ತದೆ .

ಈ  ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಸ್ವತಂತ್ರವಾಗಿ ಕೆಲಸ ಮಾಡಬಹುದಾಗಿದೆ .

ನೆಟ್ ವರ್ಕ್ ಮಾರ್ಕೆಟಿಂಗ್ ಮತ್ತು ಟ್ರೆಡಿಷನಲ್ ಮಾರ್ಕೆಟಿಂಗ್ ಮಧ್ಯೆ ಇರುವ ವ್ಯತ್ಯಾಸಗಳು :

  • ಟ್ರೆಡಿಷನಲ್ ಮಾರ್ಕೆಟಿಂಗ್ ನಲ್ಲಿ ಉತ್ಪಾದನೆಯಾದ ವಸ್ತುಗಳು -ಹೋಲ್ ಸೆಲ್ಲರ್ , ಜಾಹಿರಾತು ,ಚಿಲ್ಲರೆ ವ್ಯಾಪಾರಿ ಗಳ ನಂತರ ಗ್ರಾಹಕರ ಕೈ ಸೇರುತ್ತದೆ .
  • ನೆಟ್ ವರ್ಕ್ ಮಾರ್ಕೆಟಿಂಗ್ ನಲ್ಲಿ ಉತ್ಪಾದನೆಯಾದ ವಸ್ತುಗಳು ನೇರವಾಗಿ ಗ್ರಾಹಕರ ಕೈ ಸೇರುತ್ತದೆ .

 ನೆಟ್ವರ್ಕ್ ಮಾರ್ಕೆಟಿಂಗ್ ನ ಎರಡು ಮುಖ್ಯ ಗುರಿಗಳೆಂದರೆ :

1. ಉತ್ಪನ್ನಗಳನ್ನು ಮಾರಾಟ ಮಾಡಲು ಸಿದ್ಧರಿರುವ ಜನರ ಒಂದು ದೊಡ್ಡ ನೆಟ್ವರ್ಕ್ ಅನ್ನು ಸೃಷ್ಟಿಸುವುದು.

2. ಕಂಪನಿಯ ವಸ್ತುಗಳ ಮಾರಾಟದ ವೇಗವನ್ನು ಹೆಚ್ಚಿಸುವುದು.

ನೆಟ್ ವರ್ಕ್ ಮಾರ್ಕೆಟಿಂಗ್ ನ  ಉಪಯೋಗಗಳು :
  • ಯಾವುದೇ ಬಂಡವಾಳವಿಲ್ಲದೆ ,ಕೇವಲ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು .
  • ಇಲ್ಲಿ ಮಧ್ಯವರ್ತಿಗಳಿಗೆ ಕೊಡುವ ಹಣವನ್ನು ಗ್ರಾಹಕರೇ ಪಡೆಯುತ್ತಾರೆ .
  • ಇಲ್ಲಿ ಯಾವುದೇ ಜಾಹಿರಾತುಗಳ ಬದಲಿಗೆ , ಮಾಹಿತಿಯನ್ನು ಬಾಯಿಂದ ಬಾಯಿಗೆ  ಹಂಚಲಾಗುತ್ತದೆ .
  • ಇಲ್ಲಿ ಗ್ರಾಹಕರು ಇತರರಿಗೆ ವಸ್ತುಗಳನ್ನು ಮಾರಾಟ ಮಾಡುವುದರಿಂದ  ಹಣ ಗಳಿಸಬಹುದು .
  • ಹಾಗೆಯೇ ಇತರನ್ನು ಡಿಸ್ಟ್ರಿಬ್ಯೂಟರ್ ನ್ನಾಗಿ ಮಾಡುವುತರಿಂದ ಇಂತಿಷ್ಟು ಕಮಿಷನ್ ಪಡೆಯಬಹುದು .
  •  ಸೇಲ್ಸ್ ಸ್ಕಿಲ್ ಇರುವ ಜನರಿಗೆ  ತಮ್ಮ ಕನಸನ್ನು ಪೂರ್ಣಗೊಳಿಸಲು ಒಂದು ಉತ್ತಮ ಅಡಿಪಾಯವಾಗಿದೆ.

 ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ಭಾಗವಹಿಸುವ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು:

(ಭಾರತದಲ್ಲಿ ಇಂತಹ ಹಲವಾರು ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿ ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ ಕೊಳ್ಳುವುದು ತುಂಬಾ ಕಷ್ಟ.)


1. ಕಂಪೆನಿಯ ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸಿ :


  ನೀವು ಯಾವುದೇ ಕಂಪನಿಯನ್ನು ಸೇರುವ ಮುನ್ನ ಆ ಕಂಪನಿ ಉತ್ಪನ್ನಗಳ ಗುಣಮಟ್ಟ ಹಾಗೂ ಅವುಗಳ ಬಗ್ಗೆ ಜನರ ಅಭಿಪ್ರಾಯ ವನ್ನು ಕೇಳಿ ತಿಳಿದುಕೊಳ್ಳಿ.


2. ಕಂಪನಿಯ ಹಿನ್ನೆಲೆ, ಮಾಲಿಕತ್ವ ಅಂಶಗಳ ಬಗ್ಗೆ ಅಧ್ಯಯನ ಮಾಡಿ:

 ಕಂಪನಿಯಲ್ಲಿ ನಾಯಕತ್ವ ಗುಣ ಚೆನ್ನಾಗಿದೆಯೇ, ಅದು ಗ್ರಾಹಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

3. ಕಂಪನಿಯ  ಬಿಸಿನೆಸ್ ಪ್ಲಾನ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ:

ಕಂಪನಿಯಿಂದ ನೀಡುವ ಬಿಸಿನೆಸ್ ಪ್ಲಾನ್ ಅನ್ನು ಪಟ್ಟಿ ಮಾಡಿಕೊಂಡು ಇತರ ಕಂಪನಿಯ ಬಿಸಿನೆಸ್ ಪ್ಲಾನ್ ನೊಂದಿಗೆ ಹೋಲಿಕೆ ಮಾಡಿ ಸೂಕ್ತವೆನಿಸಿದಲ್ಲಿ ಮಾತ್ರ ಭಾಗವಹಿಸಿ.

ಭಾರತದಲ್ಲಿರುವ ಕೆಲವು ನೆಟ್ ವರ್ಕ್ ಮಾರ್ಕೆಟಿಂಗ್ ಕಂಪನಿ ಗಳು :

    ಭಾರತದಲ್ಲಿ ಪ್ರಸ್ತುತವಾಗಿ  50ಕ್ಕೂ  ಹೆಚ್ಚು ನೆಟ್ ವರ್ಕ್ ಮಾರ್ಕೆಟಿಂಗ್ ಕಂಪನಿಗಳಿವೆ . ಅವುಗಳಲ್ಲಿ ಕೆಲವನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

1. Amway
2. Milifestyle Marketing global private limited.
3. Modicare.
4. Vestige.
5. Herbalife Nutrition.

1. Amway :

 ಇದು ಒಂದು ಅಮೆರಿಕ ಮೂಲದ ಕಂಪನಿಯಾಗಿದೆ. ಇದರ ಪೂರ್ತಿ ಹೆಸರು ಅಮೇರಿಕನ್ ವೇ  (American Way).
 ಇದು ಭಾರತದ no1 ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಕಂಪನಿಯಾಗಿದೆ. 150ಕ್ಕೂ ಹೆಚ್ಚು ಸ್ಥಳಗಳಲ್ಲಿ ವರ್ಕ್  ಪ್ಲೇಸ್ ಗಳನ್ನು ಹೊಂದಿದೆ. Amway ಕಂಪನಿ ಯು 1995 ರಲ್ಲಿ ಸ್ಥಾಪನೆಯಾಯಿತು.

2.Milifestyle Marketing global private limited:

 ಈ ಕಂಪನಿಯು 2013ರಲ್ಲಿ ಚೆನ್ನೈ ನಲ್ಲಿ ಸ್ಥಾಪನೆಯಾಯಿತು. ಇದು ಅತಿ ವೇಗವಾಗಿ ಮುನ್ನುಗ್ಗುತ್ತಿರುವ ಡೈರೆಕ್ಟ್ ಸೆಲ್ಲಿಂಗ್ ಕಂಪನಿಗಳಲ್ಲಿ ಇದು ಕೂಡ ಒಂದು. ಇದು ತನ್ನ ಹಲವು ಉತ್ಪನ್ನಗಳಿಗೆ ಆಯುಷ್ ಸರ್ಟಿಫಿಕೇಟನ್ನು ಪಡೆದುಕೊಂಡಿದೆ.

 ಕಂಪನಿಯು ಹೆಲ್ತ್ ಕೇರ್, ಪರ್ಸನಲ್ ಕೇರ್, ಅಗ್ರಿಕಲ್ಚರಲ್ ಪ್ರೋಡಕ್ಟ್ ಗಳನ್ನು ಮಾರಾಟ ಮಾಡುತ್ತದೆ.

3.Modicare:

ಸಮೀರ್ ಮೋದಿ ಈ ಕಂಪನಿಯ ಮಾಲೀಕರು. 1973 ರಲ್ಲಿ ಈ ಕಂಪನಿ ಸ್ಥಾಪಿತವಾಗಿದೆ. ಇದು ಕೂಡಾ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಕಂಪನಿಗಳಲ್ಲಿ ಒಂದು.
 ಇದು ಪರ್ಸನಲ್ ಕೇರ್, ಹೆಲ್ತ್ ಕೇರ್, ಹೋಂ ಕೇರ್, ಅಗ್ರಿಕಲ್ಚರ್ ಮುಂತಾದ ಉತ್ಪನ್ನಗಳನ್ನು ಮಾರಾಟಮಾಡುತ್ತದೆ.

4. Vestige:

ಇದು 2 ಜೂನ್ 2004 ರಲ್ಲಿ ದೆಹಲಿಯಲ್ಲಿ ಸ್ಥಾಪನೆಯಯಿತು. ಭಾರತದಲ್ಲಿರುವ ಅತ್ಯುತ್ತಮ ನೆಟ್  ವರ್ಕ್ ಮಾರ್ಕೆಟಿಂಗ್ ಕಂಪನಿಗಳಲ್ಲಿ Vestige ಕೂಡ ಒಂದು.

 ಇದು ಹೆಲ್ತ್ ಕೇರ್, ಪರ್ಸನಲ್ ಕೇರ್, ಅಗ್ರಿಕಲ್ಚರ್, ಹೋಂ ಕೇರ್ ಮುಂತಾದ ಪ್ರೊಡಕ್ಟ್ ಗಳನ್ನು ಮಾರಾಟಮಾಡುತ್ತದೆ.

5. Herbalife Nutrition:

Amway ನಂತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೇರಿಕ ಮೂಲದ ಅತಿದೊಡ್ಡ ಕಂಪನಿಯೆಂದರೆ ಅದು  Herbalife.
ಈ ಕಂಪನಿಯು  1980 ರಲ್ಲಿ ಸ್ಥಾಪನೆಯಾಯಿತು. ಈ ಕಂಪನಿಯು ಪ್ರಮುಖವಾಗಿ ಹೆಲ್ತ್ ಕೇರ್, ಫಿಟ್ನೆಸ್, ನ್ಯೂಟ್ರಿಷನ್ ಮೊದಲಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗ್ರಾಮ ಸ್ವರಾಜ್ಯ ಕನ್ನಡ ಪ್ರಬಂಧ | Grama swaraj essay in kannada.

ಕರ್ನಾಟಕ ಹವಾಮಾನ ಇಂದು – ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಇತರೆ ನಗರಗಳ ನೇರ ಮಾಹಿತಿ

ಪರಿಸರ ಮಾಲಿನ್ಯ (Environmental Pollution) – ಕನ್ನಡ ಪ್ರಬಂಧ | ವಾಯು, ಜಲ ಮತ್ತು ಭೂ ಮಾಲಿನ್ಯ